ರಸಾಯನಶಾಸ್ತ್ರದಲ್ಲಿ, ಸಂಯೋಜಿತ ಅಥವಾ ಸಂಶ್ಲಿಷ್ಟವೆಂದು ವರ್ಗೀಕರಿಸಲಾದ ಮೂಲಧಾತು( )ಗಳು ಬಹಳ ಅಸ್ಥಿರವಿರುವುದರಿಂದ ಭೂಮಿಯ ಮೇಲೆ ಪ್ರಕೃತಿಸಿದ್ಧವಾಗಿ ಸಿಗುವುದಿಲ್ಲ. ಈ ಸಂಯೋಜಿತ ಧಾತುಗಳು ಭೂಮಿಯ ವಯಸ್ಸಿಗೆ ಹೋಲಿಸಿದರೆ ಅತಿ ಕಡಮೆ ಅರ್ಧಾಯುಷ್ಯಗಳನ್ನು ಹೊಂದಿರುವುದರಿಂದ ಭೂಮಿಯ ರಚನೆಯಾದಾಗ ಅಸ್ತಿತ್ವದಲ್ಲಿದ್ದಿರಬಹುದಾದ ಈ ಧಾತುಗಳ ಯಾವುದೇ ಪರಮಾಣುಗಳು ಯಾವತ್ತೋ ನಶಿಸಿ ಹೋಗಿರುತ್ತವೆ. ಈ ಕಾರಣದಿಂದ, ಸಂಯೋಜಿತ ಮೂಲಧಾತುಗಳ ಪರಮಾಣುಗಳು ಭೂಮಿಯ ಮೇಲೆ ಕೇವಲ ಬೈಜಿಕ ಸ್ಥಾವರಗಳು ಅಥವಾ ಕಣ ಉತ್ಕರ್ಷಕಗಳನ್ನು ಒಳಗೊಂಡ ಪ್ರಯೋಗಗಳ ಉತ್ಪನ್ನವಾಗಿ ಬೈಜಿಕ ಸಮ್ಮಿಲನ ಅಥವಾ ನ್ಯೂಟ್ರಾನ್ ವಿಲೀನದ ದ್ವಾರಾ ಉಪಸ್ಥಿತವಿರುತ್ತವೆ. === ವೈಶಿಷ್ಟ್ಯಗಳು === ಕೃತಕ ಮೂಲಧಾತುಗಳು ವಿಕಿರಣಶೀಲವಾಗಿ ಅತ್ಯಂತ ಕಡಿಮೆ ಅರ್ದಾಯುಷ್ಯವನ್ನು ಹೊಂದಿರುತ್ತವೆ. === ಕೃತಕ ಮೂಲಧಾತುಗಳ ಪಟ್ಟಿ === ಈ ಕೆಳಗಿನ ಮೂಲಧಾತುಗಳು ಭೂಮಿಯಲ್ಲಿ ತೃಣಮಾತ್ರ ಇರುವುದರಿಂದ ಕೃತಕವಾಗಿ ಸಂಯೋಜಿಸಲ್ಪಟ್ಟವು.